ಕಾಲೇಜ್ ಕುಮಾರ ,2017 ರ ಭಾರತದ ಕನ್ನಡ ಭಾಷೆಯ ರೊಮ್ಯಾಂಟಿಕ್ ಮತ್ತು ಹಾಸ್ಯಮಯ ಚಿತ್ರ. ಈ ಚಿತ್ರವನ್ನು ಸಂತು ಬರೆದು ನಿರ್ದೇಶಿಸಿದ್ದಾರೆ. ವಿಕ್ಕಿ ವರುಣ್ ಮತ್ತು ಸಂಯುಕ್ತ ಹೆಗಡೆ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಪಿ.ರವಿ ಶಂಕರ್, ಶೃತಿ ಮತ್ತು ಅಚ್ಯುತ ಕುಮಾರ್ ನಟಿಸಿದ್ದಾರೆ. ಅರ್ಜುನ್ ಜನ್ಯರ ಧ್ವನಿಪಥ ಮತ್ತು ಎ.ಅಳಗನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ ಈ ಚಿತ್ರವನ್ನು 1 ಮೇ ೨೦೧೬ರಂದು ಸುದೀಪ್ ರವರು ಬೆಂಗಳೂರಿನಲ್ಲಿ ಪ್ರಕಟಿಸಿದರು.ಈ ಚಿತ್ರವು 10 ನವಂಬರ್ 2017 ರಂದು ಬಿಡುಗಡೆಯಾಯಿತು. ಚಿತ್ರಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ದೊರೆಯಿತು. ರವಿಶಂಕರ್ ಮತ್ತು ಶ್ರುತಿ ಅವರ ನಟನೆ ಪ್ರಶಂಸೆಗೆ ಪಾತ್ರವಾಯಿತು. == ಪಾತ್ರವರ್ಗ == ಕುಮಾರ್ ಆಗಿ ವಿಕ್ಕಿ ವರುಣ್ ಕೀರ್ತಿ ಆಗಿ ಸಂಯುಕ್ತ ಹೆಗ್ಡೆ ಶಿವ ಕುಮಾರ್ ಆಗಿ ಪಿ. ರವಿಶಂಕರ್ ಗಿರಿಜಾ ಆಗಿ ಶೃತಿ ಅಚ್ಯುತ್ ಕುಮಾರ್ ಸಾಧು ಕೋಕಿಲಾ ಪ್ರಕಾಶ್ ಬೆಳವಾಡಿ ಸುಚಿತ್ರಾ ರಮೇಶ್ ಪಂಡಿತ್ ಸುಂದರರಾಜ್ ಅಶ್ವಿನ್ ರಾವ್ ಪಲ್ಲಕ್ಕಿ == ಉಲ್ಲೇಖಗಳು ==